Back to Top
ಕಾಡಸಿದ್ಧೇಶ್ವರರ ವಚನಗಳು Screenshot 0
ಕಾಡಸಿದ್ಧೇಶ್ವರರ ವಚನಗಳು Screenshot 1
ಕಾಡಸಿದ್ಧೇಶ್ವರರ ವಚನಗಳು Screenshot 2
ಕಾಡಸಿದ್ಧೇಶ್ವರರ ವಚನಗಳು Screenshot 3
Free website generator for mobile apps; privacy policy, app-ads.txt support and more... AppPage.net

About ಕಾಡಸಿದ್ಧೇಶ್ವರರ ವಚನಗಳು

kadasiddeshwara complete vachana collection - ಕಾಡ ಸಿದ್ಧೇಶ್ವರರ ಸಂಪೂರ್ಣ ವಚನ ಸಂಗ್ರಹ
ಕಾಡಸಿದ್ಧೇಶ್ವರ ಮಹಾರಾಷ್ಟ್ರದ ಸಿದ್ಧಗಿರಿಮಠದ ಸಂಪ್ರದಾಯಕ್ಕೆ ಸೇರಿದ ಪೀಠಾಧಿಪತಿ. ಕಾಲ ೧೭೨೫ . ‘ಸಂಗಮೇಶ್ವರದೇವರ ಕರಕಮಲದಲ್ಲಿ ಉತ್ಪತ್ಯವಾದ ಶಿಶುವು ಕಾಡಸಿದ್ಧ ನಾನಯ್ಯ’ ಎ೦ದು ಹೇಳಿಕೊಂಡಿರುವುದರಿಂದ ಈ ‘ಸಂಗಮೆಶ್ವರದೇವ’ ಈತನ ಗುರುವಾಗಿರಬೇಕು. ಜಾಯಪ್ಪ ದೇಸಾಯಿಯ ಕುವಲಯಾನಂದ ಕೃತಿಯಲ್ಲಿ ಈತನ (ಕಾಡಸಿದ್ಧೇಶ್ವರನ) ಉಲ್ಲೇಖವಿದೆ. ‘ವೀರಶೈವ ಷಟ್ ಸ್ಥಲ’ ಕಾಡಸಿದ್ಧೇಶ್ವರನ ಕೃತಿಯ ಹೆಸರು. ಇದರಲ್ಲಿ ೫೦೦ ವಚನಗಳನ್ನು ಷಟ್ ಸ್ಥಲಾನುಗುಣವಾಗಿ ಜೋಡಿಸಲಾಗಿದೆ. ವಚನಾಂಕಿತ ‘ಕಾಡನೊಳಗಾದ ಶಂಕರಪ್ರಿಯ ಚೆನ್ನ ಕದಂಬಲಿಂಗ ನಿಮಾ೯ಯ ಪ್ರಭುವೆ’ ಹೆಚ್ಚಾಗಿ ಎಲ್ಲ ವಚನಗಳು ಬೆಡಗಿನ ಪರಿಭಾಷೆಯಲ್ಲಿವೆ. ಷಟ್ ಸ್ಥಲ ತತ್ವ ಪ್ರತಿಪಾದನೆಯೇ ಇವುಗಳ ಪರಮಗುರಿಯಾಗಿದೆ. ಈ ಕೃತಿಯಲ್ಲಿ ಎದ್ದು ಕಾಣುವ ವಿಶೇಷತೆಯೆಂದರೆ ಮಧ್ಯ ಮಧ್ಯ ಬೇರೆ ಬೇರೆ ಶರಣರ ಹೆಸರುಗಳಡಿಯಲ್ಲಿ ಅವರವರ ಕಾಯಕದ ಪರಿಭಾಷೆ ಬಳಸಿ ವಚನಗಳನ್ನು ಹೆಣೆದಿರುವುದು. ಇಲ್ಲಿ ಕಂಡುಬರುವ ಶರಣರಲ್ಲಿ ಕೆಲವರು ೧೨ನೆಯ ಶತಮಾನದವರಾದರೆ, ಮತ್ತೆ ಕೆಲವರು ಇದುವರೆಗೆ ಎಲ್ಲಿಯೂ ಉಲ್ಲೇಖವಾಗದವರು. ಅವರಲ್ಲಿ ಪಿಂಜಾರ ಮಹಮದ ಖಾನಯ್ಯ, ವಲ್ಲಿ ಪೀರಣ್ಣ ಎಂಬಂಥ ಮುಸ್ಲಿಂ ಶರಣರ ಹೆಸರುಗಳೂ ಸೇರಿರುವುದು ಗಮನಾರ್ಹ. ಕೆಲವು ವಚನಗಳು ಉರ್ದು ಭಾಷೆಯಲ್ಲಿರುವುದು ಇನ್ನು ವಿಶೇಷ. ಲಿಂಗಾಯತ ತತ್ತ್ವಬೋಧೆ ಮತ್ತು ನೀತಿಬೋಧೆ. ವಚನಗಳ ನಿರೂಪಣೆ ನೇರ ಹಾಗೂ ಸ್ಪಷ್ಟವಾಗಿದೆ. ದೇಶೀಭಾಷೆ ಮತ್ತು ಕಟೂಕ್ತಿಗಳನ್ನು ವಿಶೇಷವಾಗಿ ಅಳವಡಿಸಿಕೊಳ್ಳಲಾಗಿದೆ. ಬೆಡಗಿನ ವಚನಗಳು ಒಂದು ರೂಪಕದಂತೆ ಮೈತಾಳಿ ಅನ್ಯಾರ್ಥದ ಮೂಲಕ ತತ್ವವನ್ನು ಬಿತ್ತರಿಸುತ್ತದೆ. ಅಷ್ಟಾವರಣ, ಪಂಚಾಚಾರ ಮತ್ತು ಷಟ್‍ಸ್ಥಲಸಿದ್ಧಾಂತ ರಹಸ್ಯಗಳನ್ನು ತಿಳಿಸಬಲ್ಲ ವಚನಶಾಸ್ತ್ರದಲ್ಲಿ ಕಾಡಸಿದ್ಧೇಶ್ವರ ವಚನಗಳಿಗೆ ಪ್ರಮುಖ ಸ್ಥಾನವಿದೆ.
For any issues / concerns / feedback please reach out to us at [email protected] OR contact form in https://vishaya.in

Similar Apps

ಮೂರು ಸಾವಿರ ಮುಕ್ತಿಮುನಿಗಳ ವಚನ

ಮೂರು ಸಾವಿರ ಮುಕ್ತಿಮುನಿಗಳ ವಚನ

0.0

ಮುಕ್ತಿಮುನಿ ವಚನ ಸಾಹಿತ್ಯ muktimuni kannada vachana collection ಮೂರು ಸಾವಿರ ಮುಕ್ತಿಮುನಿಗಳ ಅಂಕಿತನಾಮ 'ನಿರವಯ...

ಅರಿವಿನ ಮಾರಿತಂದೆ ವಚನ Maaritande

ಅರಿವಿನ ಮಾರಿತಂದೆ ವಚನ Maaritande

0.0

ಅರಿವಿನ ಮಾರಿತಂದೆ ವಚನ Arivina Maarithande Vachana Collectionಈತನ ಕಾಲ, ಸು. 1160. ಅರಿವಿನ ಸ್ವರೂಪದ...

ಹಡಪದ ಅಪ್ಪಣ್ಣನ ವಚನಗಳು

ಹಡಪದ ಅಪ್ಪಣ್ಣನ ವಚನಗಳು

0.0

ಹಡಪದ ಅಪ್ಪಣ್ಣ ವಚನ ಸಂಗ್ರಹ Hadapada Appanna Vachana Collectionಹಡಪದ ಅಪ್ಪಣ್ಣ ನವರು...

ಶರಣ ಆದಯ್ಯನ ವಚನ aadayya vachana

ಶರಣ ಆದಯ್ಯನ ವಚನ aadayya vachana

0.0

ಶರಣ ಆದಯ್ಯನ ವಚನ ಸಂಪೂರ್ಣ ಸಂಗ್ರಹ sharana aadayya complete vachana collectionಆದಯ್ಯ ೧೧ನೇ ಶತಮಾನದ...

ಸ್ವತಂತ್ರ ಸಿದ್ಧಲಿಂಗೇಶ್ವರ ವಚನಗಳು

ಸ್ವತಂತ್ರ ಸಿದ್ಧಲಿಂಗೇಶ್ವರ ವಚನಗಳು

0.0

swatantra siddalingeshwara vachana collection ಸ್ವತಂತ್ರ ಸಿದ್ಧಲಿಂಗನ ವಚನಗಳುತೋಂಟದ ಸಿದ್ಧಲಿಂಗರ ಶಿಷ್ಯ ಪರಂಪರೆಗೆ ಸೇರಿದ ಮತ್ತೊಬ್ಬ...

ಮೋಳಿಗೆ ಮಾರಯ್ಯನ ವಚನಗಳು

ಮೋಳಿಗೆ ಮಾರಯ್ಯನ ವಚನಗಳು

0.0

molige maarayya complete vachana collection ಮೋಳಿಗೆ ಮಾರಯ್ಯ ವಚನ ಸಂಗ್ರಹ ಈತ ಕಾಶ್ಮೀರ...