Back to Top
ಹಡಪದ ಅಪ್ಪಣ್ಣನ ವಚನಗಳು Screenshot 0
ಹಡಪದ ಅಪ್ಪಣ್ಣನ ವಚನಗಳು Screenshot 1
ಹಡಪದ ಅಪ್ಪಣ್ಣನ ವಚನಗಳು Screenshot 2
ಹಡಪದ ಅಪ್ಪಣ್ಣನ ವಚನಗಳು Screenshot 3
Free website generator for mobile apps; privacy policy, app-ads.txt support and more... AppPage.net

About ಹಡಪದ ಅಪ್ಪಣ್ಣನ ವಚನಗಳು

ಹಡಪದ ಅಪ್ಪಣ್ಣ ವಚನ ಸಂಗ್ರಹ Hadapada Appanna Vachana Collection
ಹಡಪದ ಅಪ್ಪಣ್ಣ ನವರು ಹನ್ನೆರಡನೆಯ ಶತಮಾನದ ವಚನ ಚಳುವಳಿ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರರಲ್ಲಿ ಒಬ್ಬರು. ಇವರು ಹಡಪದ ಸಮಾಜದವರಾಗಿದ್ದು ಬಸವಣ್ಣನವರ ಬಲಗೈ ಬಂಟನೆಂದೇ ಹೆಸರು ಪಡೆದಿದ್ದರು. ಹಡಪದ ಅಪ್ಪಣ್ಣನವರು ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲ್ಲೂಕಿನ ಮಸಬಿನಾಳ ಗ್ರಾಮದ ಚೆನ್ನವೀರಪ್ಪ- ದೇವಕಮ್ಮನವರ ಮಗ. ದೇಗಿನಾಳ ಗ್ರಾಮದ ಜೀರ ನಾಗಪ್ಪ- ಚೆನ್ನಬಸಮ್ಮನವರ ಮಗಳಾದ ಲಿಂಗಮ್ಮ ಇವರ ಪತ್ನಿ. ಇವರ ಕಾಲವನ್ನು ಕ್ರಿ.ಶ 1160 ಎಂದು ಗುರುತಿಸಲಾಗುತ್ತದೆ. ಇವರು ‘ಬಸವಪ್ರಿಯ ಕೂಡಲ ಚೆನ್ನಬಸವಣ್ಣ’ ಎಂಬ ಅಂಕಿತನಾಮದಲ್ಲಿ ಸುಮಾರು 250 ವಚನಗಳನ್ನು ರಚಿಸಿದ್ದಾರೆ. ‘ಹಡಪ’ ಎಂಬ ಪದಕ್ಕೆ ಎಲೆ, ಅಡಿಕೆಯನ್ನಿ ಡುವ ಚೀಲ, ಕ್ಷೌರದ ವಸ್ತುಗಳನ್ನಿಡುವ ಚೀಲ ಎಂಬ ಅರ್ಥಗಳಿರುವುದರಿಂದ ಅಪ್ಪಣ್ಣನವರ ವೃತ್ತಿಯ ಬಗ್ಗೆ ಗೊಂದಲಗಳಿವೆ. ‘ಶರಣ ಲೀಲಾಮೃತ’ದಲ್ಲಿ ಬಿಜ್ಜಳನ ಆಸ್ಥಾನದಲ್ಲಿದ್ದ ಬಸವಣ್ಣನವರಿಗೆ ಅಪ್ಪಣ್ಣನವರು ತಾಂಬೂಲ ಕಳುಹಿಸಿಕೊಟ್ಟ ‘ತಾಂಬೂಲ ಪವಾಡದ ಕತೆ’ ಇದ್ದರೆ, ಇಂದು ಕ್ಷೌರಿಕ ವೃತ್ತಿಯನ್ನು ಮಾಡುವ ಹಡಪದ ಸಮಾಜದವರು ಅಪ್ಪಣ್ಣನೇ ತಮ್ಮ ಸಮಾಜದ ಮೂಲಪುರುಷ ಎನ್ನುತ್ತಾರೆ. ಬಸವಣ್ಣನವರ ಬಾಲ್ಯದ ಒಡನಾಡಿಗಳಾಗಿದ್ದ ಇವರು ವಿಶ್ವದ ಪ್ರಪ್ರಥಮ ಪ್ರಜಾಪ್ರಭುತ್ವದ ಸಂಸತ್ತು ಎಂದೇ ಹೆಸರಾದ ಅನುಭವ ಮಂಟಪದಲ್ಲಿ ಬಸವಣ್ಣನವರಿಗೆ ಪ್ರಧಾನ ಕಾರ್ಯದರ್ಶಿಗಳಾಗಿ, ಬಸವಣ್ಣನವರಿಗೆ ಯಾವುದೇ ರೀತಿಯ ಮುಜುಗುರವಾಗದಂತೆ ಕಾರ್ಯನಿರ್ವಹಿಸಿದ ಹೆಗ್ಗಳಿಕೆ ಇವರ ಕಾರ್ಯಕ್ಷಮತೆಗೆ ಇಂದಿನವರಿಗೆ ಕನ್ನಡಿಯಾಗಿದೆಯೆಂದರೆ ತಪ್ಪಾಗಲಾರದು. ಅಂದು ಹಡಪದ ಸಮಾಜದವರು ಬೆಳಿಗ್ಗೆ ಎದರುಗಡೆ ಬಂದರೆ ಏನೋ ಆಗುತ್ತದೆ ಎಂಬ ಮೂಢ ನಂಬಿಕೆಯನ್ನು ಹೋಗಲಾಡಿಸುವುದಕ್ಕಾಗಿಯೆ ಬಸವಣ್ಣನವರು ಯಾರೇ ಬಂದರೂ ಮೊದಲು ಹಡಪದ ಅಪ್ಪಣ್ಣನವರನ್ನು ನೊಡಿಕೊಂಡು ಬರಬೇಕೆಂಬ ನಿಯಮವನ್ನೇ ಮಾಡಿದ್ದರೆಂಬ ಪ್ರತೀತಿ ಇದೆ. ಇವರ ಊರು ವಿಜಯಪುರ ಜಿಲ್ಲೆಯ ತಂಗಡಗಿಯಾಗಿರುತ್ತದೆ ಅಲ್ಲಿಯೆ ಇವರ ಸಮಾಧಿಯೂ ಸಹ ಇದೆ. ಬಸವಣ್ಣನವರ ಆಪ್ತವಲಯದ ಈತ ತಾಂಬೂಲಕರಂಡ ಕಾಯಕದವನಾಗಿದ್ದ. ಶರಣೆ ಮತ್ತು ವಚನಕಾರ್ತಿ ಲಿಂಗಮ್ಮ ಈತನ ಹೆಂಡತಿ. ಚೆನ್ನಬಸವೇಶ್ವರ ಈತನ ಗುರು. ಮಸಬಿನಾಳ, ವಿಜಯಪುರಗಳಲ್ಲಿ ಶಿಕ್ಷಣ ಪಡೆದ ಅಪ್ಪಣ್ಣನವರು ಗುರುಗಳೊಂದಿಗೆ ಕೂಡಲಸಂಗಮದಲ್ಲಿ ನೆಲೆಸಿರುವ ಸಂದರ್ಭದಲ್ಲಿಯೇ ಬಸವಣ್ಣನವರು ಕೂಡಲಸಂಗಮದಲ್ಲಿ ನೆಲೆಸಿದ್ದರಿಂದ, ಇವರಿಬ್ಬರ ನಡುವೆ ಬಾಂಧವ್ಯ ಬೆಳೆಯುತ್ತದೆ. ತರುವಾಯ ಕಲ್ಯಾಣಕ್ಕೆ ತೆರಳಿದ ಅಣ್ಣ, ಶರಣರ ಖ್ಯಾತಿ ತಿಳಿದು ಕಲ್ಯಾಣಕ್ಕೆ ಬಂದ ಬಾಲ್ಯದ ಜೊತೆಗಾರ ಅಪ್ಪಣ್ಣನವರನ್ನು ಅನುಭವ ಮಂಟಪದಲ್ಲಿ ತಮ್ಮ ಆಪ್ತ ಕಾರ್ಯದರ್ಶಿಯನ್ನಾಗಿ ನೇಮಿಸಿಕೊಳ್ಳುತ್ತಾರೆ. ಅಣ್ಣನ ಬಗ್ಗೆ ಅಪಾರವಾದ ಗೌರವ, ಭಕ್ತಿ ಹೊಂದಿದ್ದ ಅಪ್ಪಣ್ಣನವರು ಕಾಯಾ-ವಾಚಾ- ಮನಸ್ಸಿನಿಂದ ಸೇವೆ ಮಾಡಿ ಅಣ್ಣನ ಕೊನೆಗಾಲದವರೆಗೂ ಅವರ ಒಡನಾಡಿಯಾಗಿ, ಆಪ್ತಸೇವಕನಾಗಿ ಬಾಳುತ್ತಾರೆ. ಲೌಕಿಕ- ಪಾರಮಾರ್ಥಿಕಗಳೆರಡನ್ನೂ ಲೀಲಾಜಾಲವಾಗಿ ತೂಗಿಸಿಕೊಂಡು ಹೋಗುತ್ತಿದ್ದುದರಿಂದ ಶರಣರೆಲ್ಲ ಅವರನ್ನು ‘ನಿಜಸುಖಿ ಅಪ್ಪಣ್ಣ’ಎಂದೂ ಕರೆದರು. ಕಲ್ಯಾಣ ಕ್ರಾಂತಿಯ ಕೊನೆಯ ದಿನಗಳಲ್ಲೂ ಹರಳಯ್ಯನವರ ಮಗ ಶೀಲವಂತ, ಮತ್ತು ಮದುವರಸರ ಮಗಳು ಲಾವಳ್ಯರ ವಿವಾಹ ಮಾಡಿದ ನಂತರವಂತೂ ಕಲ್ಯಾಣ ಕೆಂಡದುಂಡೆಯಾಗಿತ್ತು, ಶರಣರಾದ ಹರಳಯ್ಯ_ಶೀಲವಂತ_ಮದುವರಸರಿಗೆ ಎಳೆಹೊಟ್ಟೆ ಶಿಕ್ಷೆಯಾಯ್ತು, ಅಪ್ಪ ಬಸವಣ್ಣನವರಿಗೆ ಗಡಿಪಾರು ಶಿಕ್ಷೆಯಾಯ್ತು, ಕಂಡ ಕಂಡಲ್ಲಿ ಶರಣರ ಹತ್ಯೆಯಾಯ್ತು, ಸಿಕ್ಕ ಸಿಕ್ಕಲ್ಲಿ ಶರಣರ ರುಂಢ ಕಡೆಯುವ ಆದೇಶ ಕೊಂಡೆ ಮಂಚಣ್ಣ ಕೊಟ್ಟಾಯ್ತು, ಶರಣರ ಮೇಲೆ ರಣಭೀಕರ ಹಲ್ಲೆ ಹತ್ಯೆ ಕೊಲೆಗಳಾದವು, ಕಂಡ ಕಂಡಲ್ಲಿ ವಚನ ಸಾಹಿತ್ಯವನ್ನು ಸುಟ್ಟರು, ಆದರೂ ಪಟ್ಟು ಬಿಡದ ಶರಣರು ತಲೆಯ ಮೇಲೆ ವಚನ ಕಟ್ಟುಗಳನ್ನಿಟ್ಟುಕೊಂಡು ಕಲ್ಯಾಣ ತೊರೆದರು, ‘ಪ್ರಾಣ ಬಿಟ್ಟೇವು ವಚನಗಳನ್ನು ಸುಡಲು ಬಿಡುವುದಿಲ್ಲ’ ಎಂಬ ದಿಟ್ಟ ನಿಲುವಿನಿಂದ ಒಬ್ಬೊಬ್ಬರು ಒಂದೊಂದು ಕಡೆ ಹೋದರು, ಅಲ್ಲಮರು ಅಕ್ಕಮಹಾದೇವಿಯವರು ಮುನ್ನವೇ ಶ್ರೀಶೈಲದ ಕದಳಿವನಕ್ಕೆ ತೆರಳಿದರು, ಸಿದ್ಧರಾಮರು ಮತ್ತು ಉರಿಲಿಂಗಪೆದ್ದಿಗಳು ಸೊಲ್ಲಾಪುರದ ಹಾದಿ ಹಿಡಿದರು, ಚೆನ್ನಬಸವಣ್ಣನವರ ಜೊತೆ ಅಸಂಖ್ಯಾತರು ಉಳವಿ ಮಾರ್ಗವಿಡಿದರು, ಆದರೆ ಹಡಪದ ಅಪ್ಪಣ್ಣನವರು ಬಸವಣ್ಣನವರಿಗೆ ವಿಷಯ ತಿಳಿಸಲು ಸಂಗಮಕ್ಕೆ ತೆರಳಿದರು, ಸಂಗಮದಲ್ಲಿ ತಂಗಿದ್ದ ಬಸವಣ್ಣನವರು ಭೇಟಿಯಾದ ನಂತರ ಬಸವಣ್ಣನವರು ತಂಗಡಗಿಯಲ್ಲಿದ್ದ ನೀಲಾಂಬಿಕೆಯವರನ್ನು ಕರೆತನ್ನಿ ಎಂದು ಹಡಪದ ಅಪ್ಪಣ್ಣನವರನ್ನು ಕಳಿಸುತ್ತಾರೆ, ಅಪ್ಪಣ್ಣನವರು ತಂಗಡಗಿ ತಲುಪುವಷ್ಟರಲ್ಲಿ ಕೂಡಲಸಂಗಮದಲ್ಲಿ ಘೋರ ಅತೀಘೋರವಾದ ಘಟನೆ ನಡೆದೇ ಹೋಗಿತ್ತು, ವಿಶ್ವಕ್ಕೆ ಮಾನವೀಯತೆಯ ಸಾರವನ್ನು ತಿಳಿಸಿದ, ಅಹಿಂಸಾವಾದಿ ವಿಶ್ವಗುರು ಅಪ್ಪ ಬಸವಣ್ಣನವರನ್ನು ಕೂಡಲಸಂಗಮದ ಸಮೀಪ ಹತ್ಯೆ ಮಾಡಲಾಗಿತ್ತು , ಆಮೇಲೆ ನೀಲಮ್ಮ ಮತ್ತು ಅಪ್ಪಣ್ಣ ಅವರೂ ಕರಸ್ಥಲದ ಲಿಂಗಮಧ್ಯದಲ್ಲಿ ಅಣ್ಣಬಸವಣ್ಣನನ್ನೇ ಕಂಡು ಅಲ್ಲೇ ತಂಗಡಗಿಯಲ್ಲೇ ಲಿಂಗೈಕ್ಯರಾಗುತ್ತಾರೆ. ಬನವಾಸಿಯ ಮಧುಕೇಶ್ವರ ದೇವಾಲಯದ ಶಿವೋತ್ಸವ ಮಂಟಪದ ಗಗ್ಗರಿ ಕಲ್ಲಿನ ಮೇಲಿರುವ ಶರಣರ ಶಿಲ್ಪಗಳಲ್ಲಿ ಅಪ್ಪಣ್ಣನ ವಿಗ್ರಹವು ಇದೆ. ಅಪ್ಪಣ್ಣ 'ಬಸವಪ್ರಿಯ ಕೂಡಲಚೆನ್ನಬಸವಣ್ಣ' ಅಂಕಿತದಲ್ಲಿ ಇನ್ನೂರಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದಾನೆ.

Similar Apps

ಮೂರು ಸಾವಿರ ಮುಕ್ತಿಮುನಿಗಳ ವಚನ

ಮೂರು ಸಾವಿರ ಮುಕ್ತಿಮುನಿಗಳ ವಚನ

0.0

ಮುಕ್ತಿಮುನಿ ವಚನ ಸಾಹಿತ್ಯ muktimuni kannada vachana collection ಮೂರು ಸಾವಿರ ಮುಕ್ತಿಮುನಿಗಳ ಅಂಕಿತನಾಮ 'ನಿರವಯ...

ಅರಿವಿನ ಮಾರಿತಂದೆ ವಚನ Maaritande

ಅರಿವಿನ ಮಾರಿತಂದೆ ವಚನ Maaritande

0.0

ಅರಿವಿನ ಮಾರಿತಂದೆ ವಚನ Arivina Maarithande Vachana Collectionಈತನ ಕಾಲ, ಸು. 1160. ಅರಿವಿನ ಸ್ವರೂಪದ...

ಶರಣ ಆದಯ್ಯನ ವಚನ aadayya vachana

ಶರಣ ಆದಯ್ಯನ ವಚನ aadayya vachana

0.0

ಶರಣ ಆದಯ್ಯನ ವಚನ ಸಂಪೂರ್ಣ ಸಂಗ್ರಹ sharana aadayya complete vachana collectionಆದಯ್ಯ ೧೧ನೇ ಶತಮಾನದ...

ಸ್ವತಂತ್ರ ಸಿದ್ಧಲಿಂಗೇಶ್ವರ ವಚನಗಳು

ಸ್ವತಂತ್ರ ಸಿದ್ಧಲಿಂಗೇಶ್ವರ ವಚನಗಳು

0.0

swatantra siddalingeshwara vachana collection ಸ್ವತಂತ್ರ ಸಿದ್ಧಲಿಂಗನ ವಚನಗಳುತೋಂಟದ ಸಿದ್ಧಲಿಂಗರ ಶಿಷ್ಯ ಪರಂಪರೆಗೆ ಸೇರಿದ ಮತ್ತೊಬ್ಬ...

ಮೋಳಿಗೆ ಮಾರಯ್ಯನ ವಚನಗಳು

ಮೋಳಿಗೆ ಮಾರಯ್ಯನ ವಚನಗಳು

0.0

molige maarayya complete vachana collection ಮೋಳಿಗೆ ಮಾರಯ್ಯ ವಚನ ಸಂಗ್ರಹ ಈತ ಕಾಶ್ಮೀರ...

ದೇಶಿಕೇಂದ್ರ ಸಂಗನಬಸವಯ್ಯ ವಚನಗಳು

ದೇಶಿಕೇಂದ್ರ ಸಂಗನಬಸವಯ್ಯ ವಚನಗಳು

0.0

Desikendra Sanganabasavayya Vachana collection ದೇಶಿಕೇಂದ್ರ ಸಂಗನಬಸವಯ್ಯ ಸಂಗ್ರಹ ವಚನ ದೇಶಿಕೇಂದ್ರ ಸಂಗನಬಸವಯ್ಯ ಸುಮಾರು...