Back to Top
ಅಕ್ಕಮಹಾದೇವಿ ವಚನ Akkamahadevi Screenshot 0
ಅಕ್ಕಮಹಾದೇವಿ ವಚನ Akkamahadevi Screenshot 1
ಅಕ್ಕಮಹಾದೇವಿ ವಚನ Akkamahadevi Screenshot 2
ಅಕ್ಕಮಹಾದೇವಿ ವಚನ Akkamahadevi Screenshot 3
Free website generator for mobile apps; privacy policy, app-ads.txt support and more... AppPage.net

About ಅಕ್ಕಮಹಾದೇವಿ ವಚನ Akkamahadevi

ಅಕ್ಕ ಮಹಾದೇವಿ ಸಂಪೂರ್ಣ ವಚನಗಳ ಸಂಗ್ರಹ - Akkamahadevi Complete Vachana Collection
ಹನ್ನೆರಡನೆಯ ಶತಮಾನದಲ್ಲಿದ್ದ ಅಕ್ಕಮಹಾದೇವಿ, ನಿರ್ಮಲಶೆಟ್ಟಿ ಮತ್ತು ಸುಮತಿಯರ ಮಗಳು.ಅಕ್ಕಮಹಾದೇವಿ ಕನ್ನಡದ ಪ್ರಥಮ ಮಹಿಳಾ ಕವಿಯತ್ರಿಯಾಗಿದ್ದಾರೆ. ಚಿಕ್ಕ ವಯಸ್ಸಿನಲ್ಲೆ ಸಕಲ ಸುಖವನ್ನು ತ್ಯಜಿಸಿದ ಅಕ್ಕ, ಎದುರಿಸಿದ ಪರೀಕ್ಷೆಗಳು ಬಹಳಷ್ಟು. ಸಾಕ್ಷಾತ್ ಶಿವ ( ಮಲ್ಲಿಕಾರ್ಜುನ)ನನ್ನು ಪತಿ ಎಂದು ಸ್ವೀಕರಿಸಿ, ಲೌಕಿಕ ಜಗತ್ತನ್ನು ಧಿಕ್ಕರಿಸಿ, ಕೇಶಾಂಬರೆಯಾಗಿ ನಡೆದ ಅಕ್ಕ, ಹಲವಾರು ಭಕ್ತರಿಗೆ ಮಾದರಿಯಾಗಿದ್ದಾಳೆ. ಅಕ್ಕಾ ಮಹಾದೇವಿ ಹನ್ನೆರಡನೇ ಶತಮಾನ (ಸು. 1130-1160) ಕನ್ನಡ ಕವಿ, ಸಂತ ಮತ್ತು ವಿರಶೈವ ಭಕ್ತಿ ಚಳವಳಿಯ ಅತೀಂದ್ರಿಯ. ವಿರಾಶೈವರು ಹನ್ನೆರಡನೇ ಶತಮಾನದಲ್ಲಿ ಕರ್ನಾಟಕದಲ್ಲಿ ಸಾಮಾಜಿಕ ಮತ್ತು ಆಧ್ಯಾತ್ಮಿಕ ಕ್ರಾಂತಿಕಾರಿಗಳಾಗಿದ್ದರು.
ಶರಣೆ ಅಕ್ಕಮಹಾದೇವಿಯವರು ಜನಿಸಿದ್ದು ಶಿವಮೊಗ್ಗ ಜಿಲ್ಲೆ, ಶಿಕಾರಿಪುರ-ಶಿರಾಳ ಕೊಪ್ಪದ ನಡುವೆ ಇರುವ ಉಡುತಡಿ ಅಥವಾ ಉಡಗಣಿ ಇಲ್ಲವೆ ಉಡುಗಣಿ ಎಂದೇ ಪ್ರಸಿದ್ದವಾಗಿರುವ ಪುಟ್ಟ ಗ್ರಾಮದಲ್ಲಿ.
ಇಂತಹ ಉಡುತಡಿಯಿಂದ ಎಲ್ಲವನ್ನೂ ತ್ಯಜಿಸಿ ಹೊರಟ ಅಕ್ಕಮಹಾದೇವಿಯವರು ಮುಂದೆ [ಬಸವ ಕಲ್ಯಾಣ]ದ ಅನುಭವ ಮಂಟಪದಲ್ಲಿ ಅಲ್ಲಮಪ್ರಭು, ಬಸವಣ್ಣ, ಚೆನ್ನಬಸವಣ್ಣ ಸಿದ್ಧರಾಮ ಮೊದಲಾದ ಶರಣರೊಡನೆ ಕಲ್ಯಾಣದ ಕ್ರಾಂತಿಯಲ್ಲಿ ತಮ್ಮನ್ನು ತಾವೂ ತೊಡಗಿಸಿಕೊಂಡರಲ್ಲದೇ, "ಚನ್ನಮಲ್ಲಿಕಾರ್ಜುನ" ಎಂಬ ಅಂಕಿತ ನಾಮದಲ್ಲಿ ವಚನ ಸಾಹಿತ್ಯಕ್ಕೆ (ಶರಣ ಸಾಹಿತ್ಯ) ತಮ್ಮದೇ ಆದ ಸಾಹಿತ್ಯ ಸೇವೆಯನ್ನು ಸಲ್ಲಿಸಿದ್ದಾರೆ. ಅಕ್ಕಮಹಾದೇವಿ ಶರಣ ಚಳುವಳಿಯಲ್ಲಿ ಎತ್ತರದ ಚೇತನವಾಗಿ ಮೂಡಿ ಬಂದ ವ್ಯಕ್ತಿತ್ವ. ಕನ್ನಡ ಸಾಹಿತ್ಯದಲ್ಲಿ ವಚನಗಳನ್ನು ಬರೆದ ಮೊದಲ ಮಹಿಳೆ ಇವಳು ಎಂದು ಹೇಳಲಾಗುತ್ತದೆ. ಇತರ ವಿರಶೈವ ಸಂತರು ಬಸವಣ್ಣ, ಸಿದ್ಧರಾಮ, ಅಲ್ಲಮಪ್ರಭು ಮುಂತಾದವರು ಅವರಿಗೆ ‘ಅಕ್ಕ’ ಎಂಬ ಗೌರವದ ಪದವನ್ನು ಅರ್ಪಿಸಿದರು.
ಅಕ್ಕನ ಕಾಲಕ್ಕೆ ತುಂಬಾ ಹತ್ತಿರದವನಾದ ಹರಿಹರ ಮಹಾಕವಿಯು ರಚಿಸಿರುವ 'ಮಹಾದೇವಿಯಕ್ಕಗಳ ರಗಳೆ' ಮತ್ತು ಸ್ವತಃ ಅಕ್ಕಮಹಾದೇವಿಯವರೇ ರಚಿಸುವ ವಚನಗಳೂ, ಅವರ ವ್ಯಕ್ತಿತ್ವವನ್ನು ಕಟ್ಟಿ ಕೊಡುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ. ವಚನಕಾರರಲ್ಲಿಯೇ ಅತ್ಯಂತ ಕಿರಿಯ ವಯಸ್ಸಿನ ಅನುಭಾವಿಯಾಗಿದ್ದರೂ ಸಹ, ವಿಶಿಷ್ಟ ಜೀವನಾನುಭವವನ್ನು ಹೊಂದಿದ ಕಾರಣದಿಂದ, ಅವರ ಬರಹಗಳು ಗಮನಾರ್ಹವಾಗಿವೆ. ಕೊನೆಗೆ ತನ್ನ ಇಷ್ಟದೈವ ಮಲ್ಲಿಕಾರ್ಜುನನಲ್ಲಿ ಶ್ರಿಶೈಲದ ಕದಳಿವನದಲ್ಲಿಐಕ್ಯರಾದರು ಅಕ್ಕಮಹಾದೇವಿ.

Akkamahadevi, daughter of Nirmalashetti and Sumathi in the twelfth century. Akkamahadevi is the first woman poet of Kannada The older sister who renounced all the boredom from an early age, faced a lot of tests. Sakshhat Siva (Mallikarjuna) has been adopted as a husband, defiant of the worldly world, and her sister, who is a saint, has been a role model for many devotees. Akka Mahadevi, twelfth century (c. 1130-1160) is a Kannada poet, saint and mystic of the Vairashiva devotional movement. Virashi was a social and spiritual revolutionary in Karnataka in the twelfth century.
Sarana Akkamahadevi was born in a small village in the district of Shimoga district, Shikaripura-Shirappa.
Akkamahadevi who renounced everything with such a garment, continued to engage himself in the revolution of welfare with Allamaprabhu, Basavanna, Chennabasavanna Siddarama in the front [Basava Kalyana] experience mantapa, and in the name of "Channamallikarjunna", the sannyasa literature (sannyasa literature). Akkamahadevi is a person who emerged as a high spirit in the surrender movement. She is said to have been the first woman to write oaths in Kannada literature. Other devotees, such as Basavanna, Siddarama, Allamaprabhu, paid him a word of respect.
Akkamahadevi died in kadalivana at the Srisailam.

Similar Apps

Kannada Shobane Songs

Kannada Shobane Songs

0.0

Shobane is a Carnatic language song. Shobane is a song sung by...

Kannada Odapugalu - ಒಡಪುಗಳು

Kannada Odapugalu - ಒಡಪುಗಳು

0.0

ಒಡಪುಗಳನ್ನು ಉತ್ತರ ಕರ್ನಾಟಕದ ವಿಶಿಷ್ಟ ಸಂಪ್ರದಾಯವೆಂದೇ ಹೇಳಬಹುದು. ಇದೊಂದು ಪಕ್ಕಾ ಉತ್ತರ ಕರ್ನಾಟಕ ಸೀಮೆಯ...

Kannada Actors Address Book

Kannada Actors Address Book

0.0

ಅಭಿಮಾನಿ ದೇವರುಗಳು ತಮ್ಮ ನೆಚ್ಚಿನ ಆರಾಧ್ಯ ಚಲನಚಿತ್ರ ನಟ, ನಟಿ, ನಿರ್ದೇಶಕರು, ನಿರ್ಮಾಪಕರು, ಸಂಗೀತ ನಿರ್ದೇಶಕರು...

Kannada Movie Name Guess

Kannada Movie Name Guess

0.0

A simple puzzle game. Identify the kannada film name from emoji. Can...

Karnataka Chief Ministers

Karnataka Chief Ministers

0.0

ಕರ್ನಾಟಕದ ಮುಖ್ಯಮಂತ್ರಿಗಳು ಕರ್ನಾಟಕದ ವಿದ್ಯಾವಂತ ಪ್ರಜೆಗಳು ಕರ್ನಾಟಕದ ಬಗೆಗಿನ ಸಾಮಾನ್ಯ ಮಾಹಿತಿಗಳಾದ ಇತಿಹಾಸ, ಆಡಳಿತ, ಸರ್ಕಾರ,...

ಶ್ರೀ ಭಗವದ್ಗೀತೆ ಶ್ಲೋಕ ಅರ್ಥಸಹಿತ

ಶ್ರೀ ಭಗವದ್ಗೀತೆ ಶ್ಲೋಕ ಅರ್ಥಸಹಿತ

0.0

The primary purpose of the Bhagavad Gita is to illuminate for all...